ನಟಿ ಜ್ಯೋತಿಕಾರವರ ಈ ಕೆಲಸಕ್ಕೆ ಆಶ್ಚರ್ಯಚಕಿತರಾದ ನೆಟ್ಟಿಗರು

ಚೆನ್ನೈ| pavithra| Last Modified ಬುಧವಾರ, 21 ಅಕ್ಟೋಬರ್ 2020 (11:43 IST)
ಚೆನ್ನೈ : ತಮಿಳು ನಟಿ ಜ್ಯೋತಿಕಾ ಸೂರ್ಯ ಅವರು ಇತ್ತೀಚೆಗೆ ಹುಟ್ಟುಹಬ್ಬವನ್ನು  ಆಚರಿಸಿಕೊಂಡಿದ್ದು, ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಹಲವರು ಶುಭಾಶಯ ತಿಳಿಸಿದ್ದಾರೆ. ಆದರೆ ನಿರ್ದೆಶಕ ಎರಾ ಸರವಣನ್ ಅವರು ಮಾತ್ರ ವಿಶೇಷವಾಗಿ ಶುಭ ಹಾರೈಸಿದ್ದಾರೆ.

ನಟಿ ಜ್ಯೋತಿಕಾ ಅವರು ಇತ್ತೀಚೆಗೆ ಶೂಟಿಂಗ್ ಗೆ ಹೋದಾಗ ಆಸ್ಪತ್ರೆಯೊದರ ಬಗ್ಗೆ ಕೀಳಾಗಿ ಮಾತನಾಡಿ ವಿವಾದಕ್ಕೀಡಾಗಿದ್ದರು. ಬಳಿಕ ಆಸ್ಪತ್ರೆಯ ಅಭಿವೃದ್ಧಿಗಾಗಿ 25 ಲಕ್ಷ ದೇಣಿಗೆ ನೀಡಿದ್ದರು.

ನಟಿ ಜ್ಯೋತಿಕಾ ಅವರ ಹುಟ್ಟುಹಬ್ಬದಂದು ನಿರ್ದೆಶಕ ಎರಾ ಸರವಣನ್ ಅವರು ಜ್ಯೋತಿಕಾ ಅವರ ಕೊಡುಗೆಯಿಂದ ನವೀಕರಿಸಲ್ಪಟ್ಟ ತಂಜಾವೂರು ಸರ್ಕಾರಿ ಮಿರಾಸುದಾರ್ ಆಸ್ಪತ್ರೆಯ ಫೋಟೊಗಳನ್ನು ಹಂಚಿಕೊಳ್ಳುವುದರ ಮೂಲಕ ನಟಿಗೆ ಶುಭ ಹಾರೈಸಿದ್ದಾರೆ. ಈ ಫೋಟೊಗಳು ವೈರಲ್ ಆಗಿದ್ದು, ನವೀಕರಣಗೊಂಡ ಆಸ್ಪತ್ರೆಯನ್ನು ನೋಡಿ ನೆಟ್ಟಿಗರು ಆಶ್ವರ್ಯ ಚಕಿತರಾಗಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :