ಚೆನ್ನೈ: ತಮಿಳು, ತೆಲುಗು ಮತ್ತು ಕನ್ನಡ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದ ಖ್ಯಾತ ನಟಿ ಭಾನುಪ್ರಿಯ ಮೇಲೆ ಮೂವರು ಅಪ್ರಾಪ್ತ ಬಾಲಕಿಯರನ್ನು ಮನೆಗೆಲಸಕ್ಕೆ ಬಳಸಿಕೊಂಡ ಆರೋಪ ಕೇಳಿಬಂದಿದೆ.15 ವರ್ಷದ ಆಂಧ್ರಪ್ರದೇಶ ಮೂಲದ ಬಾಲಕಿಯರನ್ನು ಭಾನುಪ್ರಿಯಾ ಮನೆಗೆಲಸಕ್ಕೆ ಸೇರಿಸಿಕೊಂಡು ಸರಿಯಾಗಿ ವೇತನವನ್ನೂ ನೀಡದೇ ಮಕ್ಕಳ ಹಕ್ಕು ಉಲ್ಲಂಘನೆ ಮಾಡಿದ್ದಾರೆಂದು ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ.ಈ ಸಂಬಂಧ ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಮಧ್ಯವರ್ತಿಯೊಬ್ಬರ ಮೂಲಕ ಭಾನುಪ್ರಿಯಾ ಮನೆಗೆ