ಕೊಚ್ಚಿ: ಜಾಕಿ, ಟಗರು ಮುಂತಾದ ಕನ್ನಡ ಚಿತ್ರದಲ್ಲಿ ನಟಿಸಿದ್ದ ಬಹುಭಾಷಾ ತಾರೆ ಭಾವನಾ ಮೆನನ್, ಕನ್ನಡ ಸಿನಿಮಾ ನಿರ್ಮಾಪಕ ನವೀನ್ ಜತೆ ಇಂದು ವಿವಾಹ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕೇರಳದ ತ್ರಿಶ್ಶೂರ್ ನಲ್ಲಿ ನಡೆಯುತ್ತಿರುವ ಅದ್ಧೂರಿ ಕಾರ್ಯಕ್ರಮದಲ್ಲಿ ಕೇವಲ ಆಪ್ತೇಷ್ಟರು ಮಾತ್ರ ಭಗವಹಿಸಿದ್ದಾರೆ. ಇಂದು 10.30 ರ ಮುಹೂರ್ತದಲ್ಲಿ ಭಾವನಾ-ನವೀನ್ ಸತಿ ಪತಿಗಳಾಗಲಿದ್ದಾರೆ. ಮಾಧ್ಯಮಗಳಿಗೆ ಈ ಕಾರ್ಯಕ್ರಮಕ್ಕೆ ಪ್ರವೇಶವಿಲ್ಲ. ಹಾಗಿದ್ದರೂ ಭಾವನಾ ಸಾಮಾಜಿಕ ಜಾಲತಾಣದಲ್ಲಿ ಮೆಹಂದಿ ಶಾಸ್ತ್ರದ ಫೋಟೋಗಳನ್ನು ಹಾಕಿದ್ದಾರೆ.ಒಂದು