ಬೆಂಗಳೂರು: ಸ್ಯಾಂಡಲ್ ವುಡ್ ನಟಿ, ಅಪ್ಪಟ ಕನ್ನಡತಿ ಹರಿಪ್ರಿಯಾ ಈಗ ಕಾಲಿವುಡ್ ಗೆ ಎಂಟ್ರಿಕೊಡುತ್ತಿದ್ದಾರೆ. ತಮಿಳಿನಲ್ಲಿ ಹೊಸ ಸಿನಿಮಾವೊಂದಕ್ಕೆ ಸಹಿ ಹಾಕಿದ ಸುದ್ದಿ ಬಂದಿದೆ. ಸುಬ್ರಮಣಿಯಂಪುರಂ ಖ್ಯಾತಿಯ ನಟ, ನಿರ್ದೇಶಕ ಶಶಿಕುಮಾರ್ ಗೆ ನಾಯಕಿಯಾಗಿ ಹೊಸ ಸಿನಿಮಾವೊಂದನ್ನು ಅವರು ಒಪ್ಪಿಕೊಂಡಿದ್ದಾರೆ. ಈ ಸಿನಿಮಾಗೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ.ಹರಿಪ್ರಿಯಾಗೆ ಪರಭಾಷೆ ಸಿನಿಮಾಗಳು ಹೊಸತೇನಲ್ಲ. ಈಗಾಗಲೇ ತೆಲುಗು ಸಿನಿಮಾ ರಂಗಕ್ಕೆ ಹೋಗಿ ಬಂದವರು. ಈಗ ತಮಿಳಿಗೆ ಕಾಲಿಡುತ್ತಿದ್ದಾರೆ. ಕನ್ನಡದಲ್ಲಿ ಹರಿಪ್ರಿಯಾ ಅಭಿನಯಿಸಿದ್ದ