ಸಾವಿನಲ್ಲೂ ಸಾರ್ಥಕತೆ ಮೆರೆದ ನಟಿ ಜಯಂತಿ

ಬೆಂಗಳೂರು| Krishnaveni K| Last Modified ಮಂಗಳವಾರ, 27 ಜುಲೈ 2021 (08:55 IST)
ಬೆಂಗಳೂರು: ಹಿರಿಯ ನಟಿ ಜಯಂತಿ ತಮ್ಮ ಸಾವಿನಲ್ಲೂ ನೇತ್ರದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.
 > ಜಯಂತಿ ನಿನ್ನೆ ತಮ್ಮ ನಿವಾಸದಲ್ಲಿ ಇಹಲೋಕ ತ್ಯಜಿಸಿದ್ದರು. ಇದೀಗ ಅವರ ಕಣ್ಣುಗಳನ್ನು ಅವರ ಕುಟುಂಬಸ್ಥರು ದಾನ ಮಾಡುವ ಮೂಲಕ ಹಿರಿಯ ನಟಿಯನ್ನು ಅಮರವಾಗಿಸಿದ್ದಾರೆ.>   ವರನಟ ಡಾ.ರಾಜ್ ಕುಮಾರ್ ಅವರನ್ನು ಆದರ್ಶವಾಗಿಟ್ಟುಕೊಂಡಿದ್ದ ಜಯಂತಿ ಕೊನೆಗೆ ಅವರಂತೆಯೇ ನೇತ್ರದಾನ ಮಾಡಿ ತಮ್ಮ ಸಾವಿನಲ್ಲೂ ಆದರ್ಶವಾಗಿದ್ದಾರೆ. ಚಿತಾಗಾರದ ಆವರಣದಲ್ಲೇ ನೇತ್ರದಾನ ಪ್ರಕ್ರಿಯೆ ಪೂರ್ಣಮಾಡಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :