ಮಗಳ ಮದುವೆ ಸುದ್ದಿ ಕೇಳಿ ನಟಿ ಕೀರ್ತಿ ಸುರೇಶ್ ತಂದೆ ಹೇಳಿದ್ದೇನು ಗೊತ್ತಾ?

ಹೈದರಾಬಾದ್| pavithra| Last Modified ಮಂಗಳವಾರ, 23 ಫೆಬ್ರವರಿ 2021 (11:48 IST)
ಹೈದರಾಬಾದ್ : ನಟಿ ಕೀರ್ತಿ ಸುರೇಶ್ ಅವರು ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್ ಅವರೊಂದಿಗೆ ಮದುವೆಯಾಗಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ.

ನಟಿ ಕೀರ್ತಿ ಸುರೇಶ್ ಜನ್ಮ ದಿನದಂದು ಅನಿರುದ್ದ್ ನಟಿಯನ್ನು ಅಭಿನಂದಿಸುವ ಛಾಯಾಚಿತ್ರವನ್ನು ಪೋಸ್ಟ್ ಮಾಡಿದ್ದರು. ಇದರಿಂದ ಹಲವರು ಅವರಿಬ್ಬರು ಪ್ರೀತಿಸುತ್ತಿದ್ದಾರೆ ಶೀಘ್ರದಲ್ಲಿಯೇ ಮದುವೆಯಾಗಲಿದ್ದಾರೆ ಎಂದು ಸೋಶಿಯಲ್ ಮೀಡಿಯದಲ್ಲಿ ವದಂತಿ ಹಬ್ಬಿಸಿದ್ದಾರೆ. ಈಗಾಗಲೇ ಈ ವದಂತಿಯನ್ನು ಕೀರ್ತಿ ಸುರೇಶ್ ಹಾಗೂ ಅನಿರುದ್ಧ್ ನಿರಾಕರಿಸಿದ್ದಾರೆ.

ಆದರೆ ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿದ ಕೀರ್ತಿ ಸುರೇಶ್ ತಂದೆ ಸುರೇಶ್ ಕುಮಾರ್, ಇದು ಕೇವಲ ವದಂತಿ. ಸತ್ಯವಲ್ಲ. ನನ್ನ ಮಗಳು ಚಿತ್ರಗಳಲ್ಲಿ ನಿರತರಾಗಿದ್ದಾರೆ, ಅವಳಿಗೆ ಮದುವೆಯಾಗುವ ಯೋಚನೆ ಇಲ್ಲ ಎಂದು ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :