ಕೊಚ್ಚಿ: ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ನಟಿಸಿ ಹೆಸರು ಮಾಡಿದ್ದ ನಟಿಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ಸ್ಟಾರ್ ನಟ ದಿಲೀಪ್ ಸಂಕಷ್ಟ ಎದುರಿಸುವಂತಾಗಿದೆ.ಮೊನ್ನೆಯಷ್ಟೇ ತನಿಖಾ ತಂಡ ದಿಲೀಪ್ ರನ್ನು ಪ್ರಶ್ನೆ ಮಾಡಿತ್ತು. ಇದೀಗ ಮತ್ತಷ್ಟು ಸಾಕ್ಷ್ಯ ಸಿಕ್ಕಿದ ಬೆನ್ನಲ್ಲೇ ವಿಚಾರಣೆಗೊಳಪಡಿಸಲು ಸಿದ್ಧವಾಗಿದೆ. ಈ ಹಿನ್ನಲೆಯಲ್ಲಿ ಬಂಧನ ಭೀತಿಯಲ್ಲಿರುವ ನಟ ದಿಲೀಪ್ ಮತ್ತು ಸ್ನೇಹಿತ್ ನಾದಿರ್ ಶಾ ಕೇರಳ ಹೈಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ