ಬೆಂಗಳೂರು : ಇತ್ತೀಚೆಗೆ ಸಿನಿಮಾ ತಾರೆಯರು ಕೂಡ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದು, ಇದೀಗ ಸ್ಯಾಂಡಲ್ ವುಡ್ ನಟಿ ಪ್ರಣೀತಾ ಕೂಡ ಶಾಲೆಯೊಂದನ್ನು ದತ್ತು ಪಡೆದು ಸಾಮಾಜಿಕ ಕಳಕಳಿ ಮರೆದಿದ್ದಾರೆ. ಹೌದು. ಬೆಂಗಳೂರಿನಲ್ಲಿ ವಾಸವಿರುವ ನಟಿ ಪ್ರಣೀತಾ ಅವರ ಹುಟ್ಟೂರು ಹಾಸನ ಸಮೀಪದ ಆಲೂರು. ಇದೀಗ ಅವರು ಹುಟ್ಟೂರಿನ ಮೇಲಿನ ಪ್ರೀತಿಯಿಂದ ಅಲ್ಲಿನ ಶಾಲೆಯೊಂದನ್ನು ದತ್ತು ಪಡೆದಿದ್ದಾರೆ. ಅಲ್ಲದೇ ಆ ಶಾಲೆಯಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲು 5 ಲಕ್ಷ ಕೂಡ ನೀಡಿದ್ದಾರೆ.