ಡ್ರಗ್ಸ್ ಮಾಫಿಯಾದಲ್ಲಿ ಹೆಸರು ಕೇಳಿಬಂದು ಆರೋಪಿಯಾಗಿ ವಿಚಾರಣೆ ಎದುರಿಸುತ್ತಿರುವ ನಟಿ ರಾಗಿಣಿ ದ್ವಿವೇದಿ ಹಠ ಹಿಡಿದಿದ್ದಾರಂತೆ. ಬೆಳ್ಳಂಬೆಳಗ್ಗಯೇ ಮನೆಯಿಂದಲೇ ತಿಂಡಿ, ಊಟ ಬೇಕು ಎಂದು ಕ್ಯಾತೆ ತೆಗೆದಿದ್ದಾರೆ ಎಂಬ ಸುದ್ದಿ ಹರಿದಾಡತೊಡಗಿದೆ ಎನ್ನಲಾಗಿದೆ.ಮಹಿಳಾ ಸಾಂತ್ವನ ಕೇಂದ್ರದಲ್ಲಿ ಸೊಳ್ಳೆಗಳೂ ಸ್ಯಾಂಡಲ್ ವುಡ್ ನಟಿಯ ನಿದ್ದೆಗೆಡಿಸಿವಯಂತೆ. ಡ್ರಗ್ಸ್ ಪೆಡ್ಲರ್ ಗಳ ಸಂಬಂಧ ಹೊಂದಿರುವ ಕುರಿತು ನಟಿ ರಾಗಿಣಿಯನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.