ಬೆಂಗಳೂರು : ಸ್ಯಾಂಡಲ್ ವುಡ್ ನಟಿ, ಮಾಜಿ ಸಂಸದೆ ರಮ್ಯಾ ಇದೀಗ ನೋಶುಗರ್ ಎಂಬ ಚಾಲೆಂಜ್ ವೊಂದನ್ನು ಸ್ವೀಕರಿಸಿದ್ದಾರಂತೆ. ಹೌದು. ರಮ್ಯಾ ಈ ಚಾಲೆಂಜ್ ಸ್ವೀಕರಿಸಲು ಒಂದು ಕಾರಣವಿದೆ. ಅದೇನೆಂದರೆ ನಟಿ ರಮ್ಯಾಗೆ ಸಕ್ಕರೆ ಹಾಗೂ ಸಿಹಿ ಪದಾರ್ಥಗಳೆಂದರೆ ತುಂಬಾ ಇಷ್ಟವಂತೆ. ಖುಷಿ ಅಥವಾ ಒತ್ತಡ ಹೆಚ್ಚಾದಾಗೆಲ್ಲ ಸಿಹಿ ತಿನ್ನತ್ತಿದ್ದ ರಮ್ಯಾಗೆ ಈಗ ಅದರಿಂದಾದ ದುಷ್ಪರಿಣಾಮ ಏನು ಎಂಬುದು ಅರ್ಥವಾಗಿದೆಯಂತೆ. ಸಕ್ಕರೆ ಹಾಗೂ ಸಿಹಿ ಪದಾರ್ಥಗಳು ತಮ್ಮ ಜೀವನ ಶೈಲಿಯ