ಬೆಂಗಳೂರು: ರಾಜಕೀಯದಲ್ಲಿ ಸಕ್ರಿಯರಾದ ಮೇಲೆ ಸಿನಿಮಾ ಕಡೆ ತಿರುಗಿಯೂ ನೋಡದ ನಟಿ ರಮ್ಯಾ ಇನ್ನು ಮುಂದೆ ಬಣ್ಣ ಹಚ್ಚಲ್ಲವೇನೋ ಎಂದುಕೊಂಡಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.2019 ರ ನಂತರ ಮತ್ತೆ ಬಣ್ಣದ ಲೋಕಕ್ಕೆ ಮರಳುವುದಾಗಿ ಸೂಚನೆ ಕೊಟ್ಟಿದ್ದಾರೆ. ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಶುಭ ಹಾರೈಸಿ ರಮ್ಯಾ ಸುದ್ದಿಯಾಗಿದ್ದರು. ಈ ಶುಭ ಹಾರೈಕೆ ನೋಡಿ ಖುಷ್ ಆಗಿದ್ದ ರಕ್ಷಿತ್, ರಮ್ಯಾಗೆ ನೀವು ಯಾವಾಗ ಚಿತ್ರರಂಗಕ್ಕೆ ಮರಳುತ್ತೀರಿ ಎಂದು