ಬೆಂಗಳೂರು: ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರದ ಚಿತ್ರೀಕರಣದ ಜತೆಯಲ್ಲೇ ಕೆಲ ಪಾತ್ರಗಳ ಆಯ್ಕೆ ಸಹ ನಡೆಯುತ್ತಿದೆ. ಈಗ ದರ್ಶನ್ ಪತ್ನಿ ಪಾತ್ರಕ್ಕೆ ನಾಯಕಿ ಆಯ್ಕೆ ಫೈನಲ್ ಆಗಿದೆ. ಕುರುಕ್ಷೇತ್ರದಲ್ಲಿ ದುರ್ಯೋಧನ ಪಾತ್ರಧಾರಿ ದರ್ಶನ್ ಪತ್ನಿ ಭಾನುಮತಿ ಪಾತ್ರಕ್ಕೆ ಮಾಲಿವುಡ್ ನಟಿ ರಮ್ಯಾ ನಂಬೀಸನ್ ರನ್ನ ಚಿತ್ರತಂಡ ಆಯ್ಕೆ ಮಾಡಿದೆ. ಈ ಹಿಂದೆ ಈ ಪಾತ್ರದಲ್ಲಿ ನಟಿ ರೆಜಿನಾ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿತ್ತು. ರಮ್ಯಾ ನಂಬೀಸನ್ ಗೆ ಕನ್ನಡದಲ್ಲಿ ಇದು ಎರಡನೇ ಸಿನಿಮಾ.