ರಾಮ್ ಚರಣ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರಂತೆ ನಟಿ ರಶ್ಮಿಕಾ ಮಂದಣ್ಣ

ಹೈದರಾಬಾದ್| pavithra| Last Modified ಮಂಗಳವಾರ, 23 ಫೆಬ್ರವರಿ 2021 (11:22 IST)
ಹೈದರಾಬಾದ್ : ಈಗಾಗಲೇ ಬಾಲಿವುಡ್  ಚಿತ್ರದಲ್ಲಿ ನಟಿಸುತ್ತಿದ್ದ ನಟಿ ಇದೀಗ ಮತ್ತೊಂದು ಚಿತ್ರದಲ್ಲಿ ಅವಕಾಶ ಪಡೆಯಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಹೌದು. ನಟಿ ರಶ್ಮಿಕಾ ಮಂದಣ್ಣ  ದಿ ಗ್ರೇಟ್ ಶಂಕರ್ ನಿರ್ದೇಶಿಸಲಿರುವ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ರಾಮ್ ಚರಣ್ ಅವರ ಜೊತೆ ರೊಮ್ಯಾನ್ಸ್ ಮಾಡಲು ನಟಿ ಒಪ್ಪಿಕೊಂಡಿದ್ದು, ಅದಕ್ಕಾಗಿ ಕಾಲ್ ಶೀಟ್ ಹೊಂದಾಣಿಕೆ ಮಾಡಿಕೊಳ‍್ಳುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ನಟಿ ರಶ್ಮಿಕಾ ಆಚಾರ್ಯ ಚಿತ್ರದಲ್ಲಿ ರಾಮ್ ಚರಣ್ ಜೊತೆ ನಟಿಸಬೇಕಿತ್ತು. ಆದರೆ ಆ ಆಫರ್ ತಪ್ಪಿ ಪೂಜಾ ಹೆಗ್ಡೆಗೆ ದೊರಕಿದೆ. ಹಾಗಾಗಿ ಇದೀಗ ಮತ್ತೆ ಬಂದ ಅವಕಾಶವನ್ನು ನಟಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :