Widgets Magazine

ಬಿಗ್ ಬಾಸ್ ನ ಸಂಭಾವ್ಯ ಪಟ್ಟಿಯಲ್ಲಿ ತಮ್ಮ ಹೆಸರು ಕೇಳಿ ಗರಂ ಆದ ನಟಿ ಶ್ರದ್ಧಾ ದಾಸ್

ಹೈದರಾಬಾದ್| pavithra| Last Modified ಗುರುವಾರ, 30 ಜುಲೈ 2020 (12:22 IST)
ಹೈದರಾಬಾದ್ : ತೆಲುಗಿನಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋಗೆ ತಯಾರಿ ನಡೆಸಲಾಗುತ್ತಿದ್ದು, ಇದರ  ಸಂಭಾವ್ಯ ಪಟ್ಟಿಯಲ್ಲಿ  ನಟಿ ಶ್ರದ್ಧಾ ದಾಸ್ ಹೆಸರು ಕೇಳಿ ಬರುತ್ತಿದ್ದು, ಈ ಬಗ್ಗೆ ನಟಿ ಫುಲ್ ಗರಂ ಆಗಿದ್ದಾರೆ ಎನ್ನಲಾಗಿದೆ.

ಬಿಗ್ ಬಾಸ್ ಸೀಸನ್ 4ರ ಹಲವಾರು ಸಂಭಾವ್ಯ ಪಟ್ಟಿ ಹರಿದಾಡುತ್ತಿದ್ದು, ಇದರಲ್ಲಿ ತೆಲುಗು ನಟಿ ಶ್ರದ್ಧಾ ದಾಸ್ ಹೆಸರು ಇರುವುದು ತಿಳಿದುಬಂದಿದೆ. ಈ ಬಗ್ಗೆ ಗರಂ ಆದ ನಟಿ ಸಾಮಾಜಿಕ ಜಾಲತಾಣದಲ್ಲಿ ಗಾಳಿ ಸುದ್ದಿಯ ವಿರುದ್ಧ ಕಿಡಿಕಾರಿದ್ದಾರೆ.

“ಬಿಗ್ ಬಾಸ್ ತೆಲುಗಿಗೆ ನನ್ನನ್ನು ಯಾರು ಸಂಪರ್ಕಿಸಿಲ್ಲ. ನಾನು ಬಿಗ್ ಬಾಸ್ ಗೆ ಹೋಗುತ್ತಿಲ್ಲ. ಅನೇಕರು ನನ್ನನ್ನು ಕೇಳುತ್ತಿದ್ದಾರೆ. ಈ ರೀತಿಯ ಸುದ್ದಿ ಹಬ್ಬಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಕೊನೆಯ ಬಾರಿ ಸ್ಪಷ್ಟಪಡಿಸುತ್ತೇನೆ. ಅಭಿಮಾನಿಗಳು ಈ ಸುದ್ದಿ ಕೇಳಿ ನಿರಾಸೆಗೊಂಡಿದ್ದಾರೆ” ಎಂದು ನಟಿ ಬರೆದುಕೊಂಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :