ಹೈದರಾಬಾದ್ : ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಚಿತ್ರದಲ್ಲಿ ನಟ ಪ್ರಭಾಸ್ ಅವರು ನಟಿಸುತ್ತಿದ್ದು, ಈ ಚಿತ್ರದ ಶೂಟಿಂಗ್ ಈಗಾಗಲೇ ಆರಂಭವಾಗಿದೆ. ನಟಿ ಶ್ರುತಿ ಹಾಸನ್ ಅವರು ಈ ಚಿತ್ರದಲ್ಲಿ ನಾಯಕಿಯಾಗಿ, ಪ್ರಭಾಸ್ ಅವರಿಗೆ ಜೋಡಿಯಾಗಿ ನಟಿಸಲಿದ್ದಾರೆ. ಈಗಾಗಲೇ ಶ್ರುತಿ ಹಾಸನ್ ಅವರ ದೃಶ್ಯದ ಭಾಗದ ಚಿತ್ರೀಕರಣ ಶುರುವಾಗಿದ್ದು, ಇತ್ತೀಚಿನ ಮಾಹಿತಿ ಪ್ರಕಾರ ಶ್ರುತಿ ಹಾಸನ್ ಅವರು ಈ ಚಿತ್ರದಲ್ಲಿ ಟಿವಿ ಪತ್ರಕರ್ತ ಪಾತ್ರವನ್ನು ನಿರ್ವಹಿಸಲಿದ್ದಾರೆ