ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಮನೆಗೆ ನಟಿಯರಾದ ಸುಧಾರಾಣಿ, ಶ್ರುತಿ, ಮಾಳವಿಕಾ ಭೇಟಿ ಕೊಟ್ಟು ಆರೋಗ್ಯ ವಿಚಾರಸಿದ್ದಾರೆ. ಆತ್ಮೀಯ ಗೆಳತಿಯರಾದ ಈ ಮೂವರು ನಟಿಯರು ಹಿರಿಯ ನಟಿಯನ್ನು ಭೇಟಿಯಾಗಿ ಆರೋಗ್ಯ ವಿಚಾರಸಿದ್ದಲ್ಲದೆ, ಅವರ ಮೆಚ್ಚಿನ ಹಾಡು ಹಾಡಿಸಿ ಸಂತೋಷದ ಕ್ಷಣ ಕಳೆದಿದ್ದಾರೆ.ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ನಟಿ ಶ್ರುತಿ ಇತ್ತೀಚೆಗೆ ಅಮ್ಮ ಕಾಲು ಜಾರಿ ಬಿದ್ದಿದ್ದರು. ಹೀಗಾಗಿ ಅವರ ಆರೋಗ್ಯ ವಿಚಾರಿಸಲು ಮನೆಗೆ ಹೋಗಿದ್ದೆವು. ಅವರ