ಬೆಂಗಳೂರು: ಬಿಗ್ ಬಾಸ್ ಮುಗಿಸಿ ಬಂದ ಮೇಲೆ ಕಿರುತೆರೆಯತ್ತ ವಾಲಿರುವ ನಟಿ ಶ್ರುತಿ ಈಗಾಗಲೇ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಜಾ ಭಾರತ ತೀರ್ಪುಗಾರರಾಗಿ ಬ್ಯುಸಿಯಾಗಿದ್ದರು. ಇದೀಗ ಹೊಸದೊಂದು ಶೋ ನಡೆಸಿಕೊಡಲು ಸಿದ್ಧರಾಗಿದ್ದಾರೆ.ಈ ಬಾರಿ ಉದಯ ಟಿವಿಗಾಗಿ. ಸತ್ಯ ಕತೆ ಎಂಬ ರಿಯಾಲಿಟಿ ಶೋ ಒಂದನ್ನು ಶ್ರುತಿ ನಡೆಸಿಕೊಡಲಿದ್ದಾರೆ. ಅಂದ ಹಾಗೆ ಇದು ಸತ್ಯ ಕತೆಗಳ, ಸಮಸ್ಯೆಗಳ ಅನಾವರಣಗೊಳಿಸುವ ವೇದಿಕೆಯಾಗಲಿದೆಯಂತೆ.ಶ್ರುತಿ ಈ ಶೋನಲ್ಲಿ ಒಂಥರಾ ಮಧ್ಯಸ್ಥಿಕೆ ಮಾಡುವ ಕೆಲಸ ಮಾಡಲಿದ್ದಾರೆ.