ಗ್ಲಾಮರಸ್ ಲುಕ್ನೊಂದಿಗೆ ಸದಾ ಸುದ್ದಿಯಲ್ಲಿರುವ ನಟಿ ಶ್ರುತಿ ಹಾಸನ್ ಕೆಲ ದಿನಗಳ ಹಿಂದೆ ವಿದೇಶಿ ನಟನೊಂದಿಗೆ ಕೈಕೈ ಹಿಡಿದುಉ ಓಡಾಡುತ್ತಿರುವ ಸುದ್ದಿ ಸದ್ದು ಮಾಡಿತ್ತು. ಇಟಲಿ ಮೂಲದ ರಂಗಭೂಮಿ ಕಲಾವಿದ ಮೈಖೇಲ್ ಜತೆಗೆ ಶ್ರುತಿ ಡೇಟಿಂಗ್ ಮಾಡುತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಪ್ರೇಮಿಗಳ ದಿನವನ್ನು ಇವರಿಬ್ಬರೂ ಭಾರತದಲ್ಲಿ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಇದರ ಜತೆಗೆ ಇವರಿಬ್ಬರ ಫೋಟೋಗಳು ಬಿಡುಗಡೆಯಾಗಿ ಹಾಟ್ ಟಾಪಿಕ್ ಆಗಿ ಬದಲಾಗಿತ್ತು.