ಬೆಂಗಳೂರು: ಚಿತ್ರರಂಗಕ್ಕೆ ನಟರ ಮಕ್ಕಳೂ ಕಾಲಿಡುತ್ತಿರುವುದು ಹೊಸದೇನೂ ಅಲ್ಲ. ಅದರಲ್ಲೂ ಇತ್ತೀಚೆಗೆ ಸ್ಟಾರ್ ಗಳ ಚಿಕ್ಕ ಮಕ್ಕಳೂ ಮಕ್ಕಳ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಸಹಜವಾಗಿದೆ.ದರ್ಶನ್ ಪುತ್ರ ವಿನೀಶ್, ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ ಚಾರಿತ್ರ್ಯ, ಪುತ್ರ ವಿಹಾನ್ ಎಲ್ಲರೂ ತೆರೆಗೆ ಕಾಲಿಟ್ಟಾಗಿದೆ. ಇದೀಗ ನಟಿ ತಾರಾ ಸರದಿ.ನಟಿ ತಾರಾ ಮತ್ತು ಛಾಯಾಗ್ರಾಹಕ ಎಚ್ ಸಿ ವೇಣು ದಂಪತಿ ಪುತ್ರ ಕೃಷ್ಣ ಈಗ ಚಿರಂಜೀವಿ ಸರ್ಜಾ ಅಭಿನಯದ ಶಿವಾರ್ಜುನ ಸಿನಿಮಾ ಮೂಲಕ ಬೆಳ್ಳಿ