ಬೆಂಗಳೂರು: ಕೊರೋನಾ ಇನ್ನೂ ದೇಶದಲ್ಲಿ ಕಡಿಮೆಯಾಗಿಲ್ಲ. ಆದರೆ ಈಗಾಗಲೇ ಕಾರ್ಮಿಕರ ಹಿತದೃಷ್ಟಿಯಿಂದ ಧಾರವಾಹಿ ಶೂಟಿಂಗ್ ಗೆ ಅನುಮತಿ ನೀಡಲಾಗಿದೆ. ಆದರೆ ಸಿನಿಮಾಗೆ ಇನ್ನೂ ಅನುಮತಿ ಸಿಕ್ಕಿಲ್ಲ. ಈ ನಡುವೆ ನಟಿ, ಬಿಜೆಪಿ ನಾಯಕಿ ತಾರಾ ಮನವಿಯೊಂದನ್ನು ಮಾಡಿದ್ದಾರೆ.ನಾವು ಈಗ ಒಬ್ಬ ಸಾರ್ವಜನಿಕರಾಗಿ ಜವಾಬ್ಧಾರಿಯುತವಾಗಿ ನಡೆದುಕೊಳ್ಳುವ ಅವಶ್ಯಕತೆಯಿದೆ. ಅದನ್ನು ಅರಿತುಕೊಂಡು ಸರ್ಕಾರದ ನಿರ್ಧಾರಕ್ಕಾಗಿ ಕಾಯಬೇಕು. ಶೂಟಿಂಗ್ ನಡೆಸಲು ಅವಸರ ಮಾಡುವುದು ಬೇಡ ಎಂಬುದು ನನ್ನ ಅಭಿಪ್ರಾಯ ಎಂದು ತಾರಾ ಹೇಳಿದ್ದಾರೆ.ಅವಸರ ಮಾಡುವುದರಿಂದ