ಹೈದರಾಬಾದ್: ಬಾಹುಬಲಿ ಸಿನಿಮಾ ಕೋಟಿಗಟ್ಟಲೆ ಬಾಚಿದ ಬೆನ್ನಲ್ಲೇ ನಾಯಕ ಪ್ರಭಾಸ್ ಸಂಭಾವನೆ ಮೀರ್ ಸರಕ್ಕನೆ ಮೇಲೇರಿದೆ. ಇದೀಗ ಅವರು ನಿರ್ಮಾಪಕರಿಗೆ ನಿಜಕ್ಕೂ ನಿಲುಕದ ತಾರೆಯಾಗಿದ್ದಾರೆ. ಬಾಹುಬಲಿ ಸಿನಿಮಾಗಾಗಿ ಐದು ವರ್ಷ ಮೀಸಲಿರಿಸಿದ್ದ ಪ್ರಭಾಸ್ 25 ಕೋಟಿ ಜೇಬಿಗಿಳಿಸಿದ್ದರು. ಇದೀಗ ಆ ಚಿತ್ರದ ಯಶಸ್ಸಿನ ನಂತರ ತಮ್ಮ ಸಂಭಾವನೆಯನ್ನು ಮತ್ತೆ 5 ಕೋಟಿಗೆ ಏರಿಸಿದ್ದಾರಂತೆ. ಅಂದರೆ ಇನ್ನು ಪ್ರಭಾಸ್ ಹಾಕಿಕೊಂಡು ಸಿನಿಮಾ ಮಾಡುವವರು ಬರೋಬ್ಬರಿ 30 ಕೋಟಿ ರೂ. ಗಂಟು