ವಿಶಿಷ್ಟವಾದ ಕಥೆಯನ್ನು ಹೊಂದಿರುವ ಚಿತ್ರಕಥಾ ಚಿತ್ರ ಈ ವಾರ ತೆರೆ ಕಾಣಲು ಸಜ್ಜುಗೊಂಡಿದೆ. ಯಶಸ್ವಿ ಬಾಲಾದಿತ್ಯ ನಿರ್ದೇಶನದ ಈ ಚೊಚ್ಚಲ ಚಿತ್ರದ ಮೂಲಕವೇ ಸುಜಿತ್ ರಾಥೋಡ್ ನಾಯಕನಾಗಿಯೂ ಎಂಟ್ರಿ ಕೊಡುತ್ತಿದ್ದಾರೆ. ಆರಂಭ ಕಾಲದಿಂದಲೂ ಪೋಸ್ಟರ್ಗಳ ಮೂಲಕವೇ ಜನರನ್ನು ಸೆಳೆಯುತ್ತಾ ಬಂದಿರೋ ಚಿತ್ರವಿದು. ಆ ನಂತರ ರೋರಿಂಗ್ ಸ್ಟಾರ್ ಬಿಡುಗಡೆಗೊಳಿಸಿದ್ದ ಟ್ರೈಲರ್ನಿಂದ ಚಿತ್ರಕಥಾ ಮತ್ತಷ್ಟು ರಂಗು ಪಡೆದುಕೊಂಡಿತ್ತು. ಹೀಗೆ ಪ್ರತೀ ಹಂತದಲ್ಲಿಯೂ ಗಾಢ ಕುತೂಹಲವನ್ನು ಹರಡುತ್ತಾ ಸಾಗಿ ಬಂದಿರೋ ಚಿತ್ರಕಥಾ ಸಸ್ಪೆನ್ಸ್