ಬೆಂಗಳೂರು: ಗೋವಾದಲ್ಲಿ ಪೆಟ್ಟು ಮಾಡಿಕೊಂಡಿದ್ದ ನಟ ದಿಗಂತ್ ಸದ್ಯದ ಆರೋಗ್ಯ ಸ್ಥಿತಿ ಗತಿ ಬಗ್ಗೆ ಇಂದು ಪತ್ನಿ, ನಟಿ ಐಂದ್ರಿತಾ ರೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.ದಿಗಂತ್ ಚೇತರಿಸಿಕೊಳ್ಳುತ್ತಿದ್ದಾರೆ. ಗೋವಾದಿಂದ ಮೂರು ಕಿ.ಮೀ.ದೂರದಲ್ಲಿರುವ ರೆಸಾರ್ಟ್ ಗೆ ಹೋಗಿದ್ದೆವು. ನಿಮಗೆಲ್ಲಾ ಗೊತ್ತಿರುವ ಹಾಗೆ ದಿಗಂತ್ ಗೆ ಸಾಹಸ ಕ್ರೀಡೆಗಳೆಂದರೆ ಇಷ್ಟ. ಹಾಗೇ ಸಮ್ಮಸ್ ಶಾಟ್ ಹೊಡೆಯುವಾಗ ಸ್ವಲ್ಪ ಆಯತಪ್ಪಿ ಕುತ್ತಿಗೆಗೆ ಪೆಟ್ಟಾಗಿದೆ. ಬೆನ್ನುಲುಬಿಗೆ ಯಾವುದೇ ತೊಂದರೆಯಾಗಿಲ್ಲ. ತಕ್ಷಣವೇ ಅವರನ್ನು ಗೋವಾ ಸರ್ಕಾರದ ಸಹಾಯದಿಂದ