ಸ್ಯಾಂಡಲ್ವುಡ್ ನಟಿ ಐಂದ್ರಿತಾ ರೈ ಅವರು ಟ್ವಿಟ್ಟರಿನಲ್ಲಿ ಹೋಟೆಲ್ವೊಂದರ ಸಿಬ್ಬಂದಿ ಮೇಲೆ ಕಿಡಿಕಾರಿದ್ದಾರೆ. ವಿಮಾನ ನಿಲ್ದಾಣದಲ್ಲಿರುವ ಟಿಫೆನ್ ಸೆಂಟರ್ ರೆಸ್ಟೋರೆಂಟ್ ವೊಂದಕ್ಕೆ ಹೋಗಿದ್ದಾಗ ಅಲ್ಲಿನ ಸಿಬ್ಬಂದಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ, ಉತ್ತಮ ಸೇವೆಗಳನ್ನು ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಟಿ ಐಂದ್ರಿತಾ ರೈ ಅವರು ಟ್ವಿಟ್ಟರಿನಲ್ಲಿ, ಏರ್ ಪೋರ್ಟ್ನಲ್ಲಿರುವ ಟಿಫೆನ್ ಸೆಂಟರ್ ರೆಸ್ಟೋರೆಂಟ್ ಸಿಬ್ಬಂದಿ ತುಂಬ ಅಸಭ್ಯ ವರ್ತನೆ ತೋರುತ್ತಿದ್ದಾರೆ. ಆಹಾರಕ್ಕಾಗಿ ಹಣ ನೀಡಿದ ಗ್ರಾಹಕರೊಂದಿಗೆ ಕೆಟ್ಟದಾಗಿ