ಸಿನಿಮಾಗೆ ಎಂಟ್ರಿ ಕೊಟ್ಟ ಅಜೇಯ್ ರಾವ್ ಪುತ್ರಿ ಚರಿಷ್ಮಾ

ಬೆಂಗಳೂರು| Krishnaveni K| Last Modified ಗುರುವಾರ, 25 ನವೆಂಬರ್ 2021 (09:28 IST)
ಬೆಂಗಳೂರು: ನಟ ಅಜೇಯ್ ರಾವ್ ಪುತ್ರಿ ಚರಿಷ್ಮಾ ರಾವ್ ಸಿನಿಮಾಗೆ ಎಂಟ್ರಿಕೊಟ್ಟಿದ್ದಾಳೆ. ತಂದೆಯ ಚಿತ್ರದಲ್ಲಿ ಬಾಲನಟಿಯಾಗಿ ಬಣ್ಣ ಹಚ್ಚಿದ್ದಾಳೆ.

ಅಜೇಯ್ ರಾವ್-ರಚಿತಾ ರಾಂ ಅಭಿನಯದ ‘ಲವ್ ಯೂ ರಚ್ಚು’ ಸಿನಿಮಾದಲ್ಲಿ ಚರಿಷ್ಮಾ ಪುಟ್ಟ ಪಾತ್ರ ಮಾಡಿದ್ದಾಳೆ. ದೃಶ್ಯವೊಂದಕ್ಕೆ ಬಾಲನಟಿಯ ಅಗತ್ಯವಿದೆಯೆಂದು ಗೊತ್ತಾದಾಗ ಚಿತ್ರತಂಡಕ್ಕೆ ಚರಿಷ್ಮಾಳನ್ನು ಕರೆತರುವ ಯೋಚನೆ ಬಂದಿತ್ತಂತೆ.


ಅದಕ್ಕೆ ಅಜೇಯ್ ರಾವ್ ದಂಪತಿ ಕೂಡಾ ಸಮ್ಮತಿಸಿದರಂತೆ. ಅದರಂತೆ ಚರಿಷ್ಮಾ ಪುಟ್ಟ ಪಾತ್ರ ಮಾಡಿದ್ದಾಳೆ. ಈ ದೃಶ್ಯದಲ್ಲಿ ಚರಿಷ್ಮಾ ಮುದ್ದಾಗಿ ಅಭಿನಯಿಸಿದ್ದಾಳೆ ಎಂದಿದೆ ಚಿತ್ರತಂಡ.


ಇದರಲ್ಲಿ ಇನ್ನಷ್ಟು ಓದಿ :