ನಟ ಅಜೇಯ್ ರಾವ್ ಪಾಲಿಗೆ ‘ಕೃಷ್ಣ’ನೇ ಲಕ್ಕಿ

ಬೆಂಗಳೂರು| Krishnaveni K| Last Modified ಭಾನುವಾರ, 17 ಜನವರಿ 2021 (09:30 IST)
ಬೆಂಗಳೂರು: ಯಶಸ್ಸಿಗಾಗಿ ಕಾಯುತ್ತಿದ್ದ ನಟ ಅಜೇಯ್ ರಾವ್ ಗೆ ಮತ್ತೆ ಕೃಷ್ಣ ಟೈಟಲ್ ಅದೃಷ್ಟ ತಂದುಕೊಡುವ ಲಕ್ಷಣ ಕಾಣುತ್ತಿದೆ.
 

ಈ ಮೊದಲೂ ಅಜೇಯ್ ರಾವ್ ಕೃಷ್ಣ ಟೈಟಲ್ ನಲ್ಲಿ ಸಿನಿಮಾ ಮಾಡಿದಾಗಲೆಲ್ಲಾ ಸಕ್ಸಸ್ ಕಂಡಿದ್ದಾರೆ. ಬಹುಶಃ ಈ ಟೈಟಲ್ ಅವರ ಪಾಲಿಗೆ ಅದೃಷ್ಟವಿರಬೇಕು. ಈಗ ಮತ್ತೆ ‘ಕೃಷ್ಣ ಟಾಕೀಸ್’ ಎನ್ನುವ ಸಿನಿಮಾ ಮೂಲಕ ತೆರೆಗೆ ಬರುತ್ತಿದ್ದಾರೆ. ಈ ಸಿನಿಮಾದ ಹಾಡೊಂದು ಬಿಡುಗಡೆಯಾಗಿದ್ದು, ಇದು ಹಿಟ್ ಆಗಿದೆ. ಹೀಗಾಗಿ ಅಜೇಯ್ ರಾವ್ ಗೆ ಮತ್ತೆ ‘ಕೃಷ್ಣ’ ರೂಪದಲ್ಲಿ ಅದೃಷ್ಟ ಬರುವ ನಿರೀಕ್ಷೆಯಿದೆ.
ಇದರಲ್ಲಿ ಇನ್ನಷ್ಟು ಓದಿ :