Widgets Magazine

ಸಿಸಿಬಿ ವಿಚಾರಣೆಗೆ ಹಾಜರಾದ ಅಕುಲ್ ಬಾಲಾಜಿ

ಬೆಂಗಳೂರು| Krishnaveni K| Last Modified ಶನಿವಾರ, 19 ಸೆಪ್ಟಂಬರ್ 2020 (10:11 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಘಟಾನುಘಟಿ ನಟ-ನಟಿಯರನ್ನೇ ಬಿಡುವ ಲಕ್ಷಣ ಕಾಣುತ್ತಿಲ್ಲ. ಇದೀಗ ನಿರೂಪಕ ಅಕುಲ್ ಬಾಲಾಜಿಗೂ ಸಿಸಿಬಿ ನೋಟಿಸ್ ನೀಡಲಾಗಿದೆ.
 

ಹೈದರಾಬಾದ್ ನಿಂದ ವಿಚಾರಣೆಗಾಗಿ ಆಗಮಿಸಿರುವ ಅಕುಲ್ ಬಾಲಾಜಿ ಇದಕ್ಕೂ ಮೊದಲು ಮಾಧ‍್ಯಮಗಳ ಮುಂದೆ ಮಾತನಾಡಿದ್ದಾರೆ. ನನಗೆ ವೈಭವ್ ಜೈನ್ ಜತೆಗೆ ಹಾಯ್ ಬಾಯ್ ಪರಿಚಯವಿತ್ತಷ್ಟೇ.
 
ಅಕುಲ್ ರೆಸಾರ್ಟ್ ಒಂದರ ಒಡೆತನ ಹೊಂದಿದ್ದು ಇದನ್ನು ಕೆಲವು ಸಮಯದ ಮಟ್ಟಿಗೆ ಲೀಸ್ ಗೆ ಬಿಟ್ಟಿದ್ದಾರಂತೆ. ಇಲ್ಲಿ ನಡೆದಿದ್ದ ಕಾರ್ಯಕ್ರಮದ ಬಗ್ಗೆ ಅಕುಲ್ ಗೆ ಸದ್ಯಕ್ಕೆ ಮಾಹಿತಿಯಿಲ್ಲ. ಆದರೆ ಅಲ್ಲಿ ನಡೆದಿರಬಹುದಾದ ಯಾವುದಾದರೂ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಈ ನೋಟಿಸ್ ನೀಡಿರಬಹುದು. ನನಗೆ ಗೊತ್ತಿರುವ ಎಲ್ಲಾ ವಿಚಾರವನ್ನು ಹೇಳುತ್ತೇನೆ. ನನ್ನ ತಾಯಿ ಯಾವಾಗಲೂ ಹೇಳ್ತಾರೆ ತಪ್ಪು ಮಾಡದ ಮೇಲೆ ಹೆದರಬೇಕಾಗಿಲ್ಲ ಅಂತ. ಅದನ್ನೇ ನಾನು ಫಾಲೋ ಮಾಡ್ತೀನಿ. ಡ್ರಗ್ಸ್ ನವರಿಗೂ ನನಗೂ ಸಂಬಂಧವಿಲ್ಲ. ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದು ಅಕುಲ್ ಹೇಳಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :