ಬೆಳ್ಳಿಪರದೆಗೆ ಹತ್ತಿರವಾಗಿ ಕುಟುಂಬಕ್ಕೆ ದೂರವಾದ ಬೆಡಗಿ ಅಮಲಾ ಪೌಲ್. ರೀ ಎಂಟ್ರಿ ಮೂಲಕ ಈಗ ಫುಲ್ ಜೋಶ್ನಲ್ಲಿದ್ದಾರೆ. ಈಗಾಗಲೆ ಅಮ್ಮ ಗ್ಲಾಮರ್ ಮೂಲಕ ಎಲ್ಲರ ಗಮನಸೆಳೆಯುತ್ತಿರುವ ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಗ್ಲಾಮರ್ ಆಗುವುದು ಗ್ಯಾರಂಟಿ ಎನ್ನುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ ಹೆಬ್ಬುಲಿ ಚಿತ್ರ ಇದಕ್ಕೆ ನಿದರ್ಶನ. ಚಿತ್ರದಲ್ಲಿ ಗ್ಲಾಮರ್ ಗೊಂಬೆಯಂತೆ ಕಂಗೊಳಿಸಿದ್ದಾರೆ. ಒಬ್ಬ ವೈದ್ಯೆಯಾಗಿ ಕಾಣಿಸಿಕೊಂಡಿರುವ ಅವರು ಹೆಚ್ಚಾಗಿ ಹಾಡುಗಳಲ್ಲಿ ಮಿಂಚಿದ್ದಾರೆ. ಅವರ ಡ್ರೆಸ್ ನೋಡಿದವರು ಶಾಕ್ ಆಗಿದ್ದಾರೆ.