ಬೆಂಗಳೂರು : ಅಂಬಿ ನಿಧನರಾದ ಹಿನ್ನಲೆಯಲ್ಲಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ನಟ ಜಗ್ಗೇಶ್ ಅವರು ಅಂಬಿಗೆ ಜಾತಕದಲ್ಲಿ ಕಂಟಕವಿತ್ತು ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಖ್ಯಾತ ಜ್ಯೋತಿಷಿ ಪ್ರಕಾಶ್ ಮಣ್ಯ ಅಂಬರೀಶ್ ಜಾತಕದಲ್ಲಿ ಸದ್ಯ ಸ್ವಲ್ಪ ತೊಂದರೆ ಇದೆ, ಆರೋಗ್ಯದಲ್ಲಿ ವ್ಯತ್ಯಯವಾಗಲಿದೆ. ಹೋಮ ಮಾಡಿಸಬೇಕು ಎಂದಿದ್ದರು. ಇದೇ ತಿಂಗಳ 12ರಂದು ಹೋಮ ಕಾರ್ಯ ನಿಗದಿಯಾಗಿತ್ತು. ಆದ್ರೆ ಕೇಂದ್ರ ಸಚಿವ ಅನಂತ್ ಕುಮಾರ್ ನಿಧನ ಹಿನ್ನೆಲೆಯಲ್ಲಿ ಹೋಮವನ್ನ ಮುಂದೂಡಲಾಗಿತ್ತು