ಬೆಂಗಳೂರು: ಸಾರ್ವಜನಿಕರ ಕಷ್ಟಗಳ ಬಗ್ಗೆ ಅಂಬರೀಷ್ ಎಷ್ಟು ಕಳಕಳಿ ಹೊಂದಿದ್ದರು ಎಂಬುದಕ್ಕೆ ನಿನ್ನೆ ನಡೆದಿದ್ದ ಮಂಡ್ಯ ಬಸ್ ದುರಂತ ಪ್ರಕರಣವೂ ಸಾಕ್ಷಿ.ಸಾವಿನ ಕೊನೆಯ ಕ್ಷಣದಲ್ಲೂ ಅಂಬಿ ತಮ್ಮ ಊರಿನಲ್ಲಿ ನಡೆದ ಈ ದುರ್ಘಟನೆ ಬಗ್ಗೆ ವಿಚಾರಸಿಕೊಂಡಿದ್ದರಂತೆ. ಮಂಡ್ಯ ಬಸ್ ದುರಂತದಲ್ಲಿ ಸಾವನ್ನಪ್ಪಿದವರ ಬಗ್ಗೆ ದೂರವಾಣಿ ಮೂಲಕ ವಿವರಣೆ ತಿಳಿದುಕೊಂಡಿದ್ದರಂತೆ ಎಂದು ವರದಿಯಾಗಿದೆ.ಬಹುಶಃ ತಮ್ಮ ಹುಟ್ಟೂರಿನಲ್ಲಿ ನಡೆದಿದ್ದ ಈ ಸಾವಿನ ಬಗ್ಗೆ ಅಂಬರೀಷ್ ಕೊನೆಯ ಕ್ಷಣದಲ್ಲಿ ತೀರಾ ನೋವು ಅನುಭವಿಸಿರಬೇಕು. ಚಿತ್ರರಂಗದಲ್ಲಿರಲಿ,