ಬೆಂಗಳೂರು: ಕಿರಿಕ್ ಪಾರ್ಟಿ ಸಿನಿಮಾದ ನಂತರ ನಿರ್ದೇಶಕ ರಿಷಬ್ ಶೆಟ್ಟಿ ಹೊಸ ಹೊಸ ಸಾಹಸ ಮಾಡಲು ಮುಂದಾಗುತ್ತಿದ್ದಾರೆ. ಈಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೂಡು ಚಿತ್ರದಲ್ಲಿ ಬ್ಯುಸಿಯಾಗಿರುವ ಅವರು ನಂತರ ಬಾಲಿವುಡ್ ಸಿನಿಮಾವೊಂದನ್ನು ಮಾಡಲಿದ್ದಾರಂತೆ. ಅಂದ ಹಾಗೇ ಅವರು ಸಿನಿಮಾ ಮಾಡುತ್ತಿರುವುದು ಅಮಿತಾಭ್ ಬಚ್ಚನ್ ಅವರಿಗಾಗಿಯಂತೆ. ರಿಷಬ್ ಶೆಟ್ಟಿ ಅವರ ಕಥೆ ಬಿಗ್ ಬಿ ಗೆ ಕೂಡ ಇಷ್ಟ ಆಗಿದೆಯಂತೆ. ಇನ್ನೂ ಒಂದು ವಿಶೇಷವೇನೆಂದರೆ ನಟ ಸುದೀಪ್ ಕೂಡ