ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ಅಕ್ರಮಗಳನ್ನ ಬಯಲಿಗೆಳೆದಿದ್ದ ದಿಟ್ಟ ಐಪಿಎಸ್ ಅಧಿಕಾರಿ ರೂಪಾ ಕುರಿತ ಚಿತ್ರ ‘ಐಪಿಎಸ್ ರೂಪಾ’ ನಿರ್ಮಾಣವಾಗಲಿದೆ ಎನ್ನುವ ವಿಷಯ ಗಾಂಧಿನಗರದಲ್ಲಿ ಸಖತ್ ಸದ್ದು ಮಾಡಿತ್ತು. ಇದೀಗ ನಿರ್ದೇಶಕ ಎ.ಎಂ.ಆರ್ ರಮೇಶ್, ಡಿಐಜಿ ರೂಪಾರನ್ನು ಭೇಟಿಯಾಗಿ ಈ ಕುರಿತು ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.