ಕಿರುತೆರೆ ನಟಿ ಮೇಘಾ ಶೆಟ್ಟಿ, ಅಮೂಲ್ಯ ಗೌಡಗೆ ಹ್ಯಾಕರ್ ಗಳ ಕಾಟ

ಬೆಂಗಳೂರು| Krishnaveni K| Last Modified ಶನಿವಾರ, 5 ಡಿಸೆಂಬರ್ 2020 (09:04 IST)
ಬೆಂಗಳೂರು: ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳಿಗೆ ಹ್ಯಾಕರ್ ಗಳ ಕಾಟ ಶುರುವಾಗಿದೆ. ಕಿರುತೆರೆಯ ಹಲವರ ಖಾತೆಗಳು ಹ್ಯಾಕ್ ಆದ ಸುದ್ದಿ ಬರುತ್ತಿದೆ.

 
ಜೊತೆ ಜೊತೆಯಲಿ ಧಾರವಾಹಿ ನಾಯಕಿ ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿ, ಕಮಲಿ ಧಾರವಾಹಿ ನಾಯಕಿ ನಟಿ ಇನ್ ಸ್ಟಾಗ್ರಾಂ ಖಾತೆಗಳು ನಿನ್ನೆ ಹ್ಯಾಕ್ ಆಗಿದೆ. ಚಾನೆಲ್ ಗಳ ಇನ್ ಸ್ಟಾಗ್ರಾಂ ಖಾತೆ, ಧಾರವಾಹಿ ಅಭಿಮಾನಿಗಳ ಫ್ಯಾನ್ ಪೇಜ್ ಗಳು ಒಂದೊಂದಾಗಿ ಹ್ಯಾಕ್ ಆಗುತ್ತಿವೆ. ಸೆಲೆಬ್ರಿಟಿಗಳ ಖಾತೆ ಮೇಲೆ ಹ್ಯಾಕರ್ ಗಳ ಕಣ್ಣು ಬಿದ್ದಿದ್ದು, ಖಾಸಗಿ ಫೋಟೋಗಳು ಲೀಕ್ ಆಗುವ ಭೀತಿಯಿದೆ.
ಇದರಲ್ಲಿ ಇನ್ನಷ್ಟು ಓದಿ :