'ಮಾಸ್ಟರ್' ಚಿತ್ರ ಸೋರಿಕೆ ಮಾಡಿದ ಕಂಪೆನಿಯ ನೌಕರನಿಗೆ ಬಿತ್ತು ಭಾರೀ ದಂಡ

ಹೈದರಾಬಾದ್| pavithra| Last Updated: ಗುರುವಾರ, 21 ಜನವರಿ 2021 (12:43 IST)
ಹೈದರಾಬಾದ್ :  ಕಮಾಂಡರ್ ವಿಜಯ್ ಅಭಿನಯದ ಮಾಸ್ಟರ್ ಚಿತ್ರ ಜನವರಿ 13ರಂದು ವಿಶ್ವದಾದ್ಯಂತ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಆದರೆ ಈ ಚಿತ್ರ ಬಿಡುಗಡೆಗೂ ಮುನ್ನ ಸೋರಿಕೆಯಾಗಿ ನಿರ್ಮಾಪಕರಿಗೆ ಭಾರೀ ಆಘಾತವನ್ನುಂಟು ಮಾಡಿತ್ತು.

ಹೌದು. ಚಿತ್ರ ಬಿಡುಗಡೆಗಾಗಿ ನಿರ್ಮಾಪಕರು ಖಾಸಗಿ ಡಿಜಿಟಲ್ ಕಂಪೆನಿಗೆ ಡಿಜಿಟಲ್ ಮುದ್ರಣಗಳನ್ನು ವಿದೇಶಕ್ಕೆ ಕಳುಹಿಸಲು ತುಣುಕನ್ನು ನೀಡಿದ್ದರು. ಆದರೆ ಕಂಪೆನಿಯ ಉದ್ಯೋಗಿಯೊಬ್ಬರು ಮಾಸ್ಟರ್ ಚಿತ್ರದಿಂದ ಹಲವಾರು ದೃಶ್ಯಗಳನ್ನು ಸೋರಿಕೆ ಮಾಡಿದ್ದಾರೆ.

ಇದರಿಂದ ಆಘಾತಕ್ಕೊಳಗಾದ ನಿರ್ಮಾಪಕರು ಸೋರಿಕೆಗೆ ಸಂಬಂಧಿಸಿದಂತೆ ಅಪರಾಧಿಗಳ ವಿರುದ್ಧ ಮೊಕದ್ದಮೆ ಹೂಡಲು ನಿರ್ಧರಿಸಿ, ಸೋರಿಕೆ ಮಾಡಿದ ನೌಕರನಿಗೆ ಪರಿಹಾರವಾಗಿ 25ಕೋಟಿ ರೂ. ನೀಡುವಂತೆ ಮೊಕದ್ದಮೆ ಹೂಡಿದ್ದಾರೆ. ಮತ್ತು ಈಗಾಗಲೇ ಡಿಜಿಟಲ್ ಕಂಪೆನಿಗೆ ಲೀಗಲ್ ನೋಟಿಸ್ ಕಳುಹಿಸಲಾಗಿದೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :