ಬೆಂಗಳೂರು: ಕೆಲವರಿಗೆ ವಯಸ್ಸಾದರೂ ತಮ್ಮ ಚಾರ್ಮ್ ಮಾತ್ರ ಕಡಿಮೆಯಾಗಲ್ಲ. ಅಂತಹ ನಟರ ಸಾಲಿನಲ್ಲಿ ಬರುವವರು ಅನಂತ್ ನಾಗ್. ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ಬಹುಬೇಡಿಕೆಯ ಸುಂದರಾಂಗ ನಾಯಕ ಎನಿಸಿಕೊಂಡಿದ್ದ ಅನಂತ್ ನಾಗ್ ಇಂದಿಗೂ ಅದೇ ಚಾರ್ಮ್ ಉಳಿಸಿಕೊಂಡಿದ್ದಾರೆ. ಅವರಿಂದು ಜನ್ಮದಿನ ಆಚರಿಸಿಕೊಳ್ಳುತ್ತಿದ್ದು 74 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.ಈ ಇಳಿವಯಸ್ಸಿನಲ್ಲೂ ಅನಂತ್ ನಾಗ್ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಈಗಲೂ ಅವರು ಬ್ಯುಸಿ ನಟ. ದೃಶ್ಯ 2, ಅಬ್ರಕಡಾಬ್ರ, ಗಾಳಿಪಟ 2, ಮೇಡ್ ಇನ್