ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯೆಂದರೆ ಹಿರಿಯ ನಟ ಅನಂತ್ ನಾಗ್ ಗೆ ಒಂದು ರೀತಿಯಲ್ಲಿ ಅಚ್ಚುಮೆಚ್ಚು. ರಕ್ಷಿತ್ ಗೂ ಅನಂತ್ ನಾಗ್ ಎಂದರೆ ವಿಶೇಷ ಗೌರವವಿದೆ. ಇದೀಗ ಉಡುಪಿಯಲ್ಲಿ ಶೂಟಿಂಗ್ ನಲ್ಲಿರುವ ಅನಂತ್ ನಾಗ್ ಅಲ್ಲಿನ ರಕ್ಷಿತ್ ಶೆಟ್ಟಿ ಮನೆಗೆ ಪತ್ನಿ ಸಮೇತ ಭೇಟಿ ನೀಡಿದ್ದಾರೆ. ರಕ್ಷಿತ್ ಸಹೋದರ ರಂಜಿತ್ ಶೆಟ್ಟಿ ಮತ್ತು ಕುಟುಂಬದವರೊಂದಿಗೆ ಅನಂತ್ ನಾಗ್ ದಂಪತಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಅಬ್ರಕಡಬ್ರ ಸಿನಿಮಾ ಶೂಟಿಂಗ್