ಬೆಂಗಳೂರು: ಕಿರುತೆರೆಯಲ್ಲಿ ಆಂಕರ್ ಆಗಿ ಜನಮನ ಗೆದ್ದಿರುವ ಅನುಶ್ರೀ ಈಗ ಮತ್ತೆ ಸಿನಿಮಾ ಮಾಡಲು ಹೊರಟಿದ್ದಾರೆ. ಈ ಬಗ್ಗೆ ಈಗಾಗಲೇ ಅವರು ಹೇಳಿಕೊಂಡಿದ್ದರು.ಆಂಕರ್ ಅನುಶ್ರೀ ಈಗಾಗಲೇ ಕೆಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಆದರೆ ಕೆಲವು ಸಮಯದ ಬ್ರೇಕ್ ನಂತರ ಮತ್ತೆ ಸಿನಿಮಾ ಲೋಕಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ.ಎಸ್ಎಂ ಪಾರ್ತಿಬನ್, ಪುನೀತ್ ಎಚ್. ನಿರ್ಮಾಣದ ಪ್ರಭಾಕರ್ ನಿರ್ದೇಶಿಸುತ್ತಿರುವ ಹೊಸ ಸಿನಿಮಾದ ಟೈಟಲ್ ಲಾಂಚ್ ಇಂದು ಕಲಾವಿದರ ಸಂಘದಲ್ಲಿ ನಡೆಯಲಿದೆ. ಈ