ಬೆಂಗಳೂರು: ಡ್ರಗ್ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬರುತ್ತಿರುವ ಹಿನ್ನಲೆಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಆಂಕರ್ ಅನುಶ್ರೀ ಸ್ಪಷ್ಟನೆ ನೀಡಿದ್ದಾರೆ.ತಮ್ಮ ಹೆಸರು ಕೈ ಬಿಟ್ಟಿದ್ದಕ್ಕೆ ಪ್ರಭಾವಿಗಳ ಒತ್ತಡ ಕಾರಣ, ತಾವು ಮುಂಬೈಗೆ ಓಡಿ ಹೋಗಿರುವುದಾಗಿ ಬಂದಿರುವ ವರದಿಗಳಿಗೆ ಅನುಶ್ರೀ ಸ್ಪಷ್ಟನೆ ನೀಡಿದ್ದಾರೆ.ನಾನು ಸೋಮವಾರ ಮುಂಬೈಗೆ ನನ್ನ ಕೆಲಸದ ಮೇರೆಗೆ ಹೋಗಿ ಅದೇ ದಿನ ವಾಪಸ್ ಬಂದಿದ್ದೇನೆ. ಎಲ್ಲೂ ಓಡಿ ಹೋಗಿಲ್ಲ. ನನಗೆ ಯಾವ ಪ್ರಭಾವಿಗಳೂ ಗೊತ್ತಿಲ್ಲ. ಯಾರನ್ನೂ ಪ್ರಕರಣದಿಂದ ಕೈ ಬಿಡಲು ಒತ್ತಡ