ಬಿಗ್ ಬಾಸ್ ಗೆ ಕಾಲಿಡಲಿರುವ ಆ ಆಂಕರ್ ಯಾರು ಗೊತ್ತಾ?

ಬೆಂಗಳೂರು| Krishnaveni K| Last Modified ಶುಕ್ರವಾರ, 20 ಸೆಪ್ಟಂಬರ್ 2019 (09:58 IST)
ಬೆಂಗಳೂರು: ಸೀಸನ್ 7 ಆರಂಭಕ್ಕೆ ಕೆಲವೇ ದಿನಗಳು ಬಾಕಿಯುಳಿದಿದ್ದು, ಈ ಬಾರಿ ಯಾರೆಲ್ಲಾ ಸ್ಪರ್ಧಿಗಳಾಗಿ ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರೆ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿದೆ.

 
ಅಕ್ಟೋಬರ್ ನಲ್ಲಿ ಬಿಗ್ ಬಾಸ್ ಆರಂಭವಾಗುವ ಸಾಧ್ಯತೆಯಿದೆ. ಈ ಬಾರಿ ಬಿಗ್ ಬಾಸ್ ನಲ್ಲಿ ಕೇವಲ ಸೆಲೆಬ್ರಿಟಿಗಳು ಮಾತ್ರ ಪಾಲ್ಗೊಳ್ಳಲಿದ್ದು, ಕಿರುತೆರೆ ನಟ ಜಯ್ ಡಿ ಸೋಜಾ, ನಟಿ ಅಮೂಲ್ಯ ಮತ್ತಿತರ ಹೆಸರು ಕೇಳಿಬರುತ್ತಿದೆ.
 
ಇದೀಗ ಹೊಸ ಸ್ಪರ್ಧಿಯ ಹೆಸರು ಕೇಳಿಬರುತ್ತಿದ್ದು ಅವರು ಆಂಕರ್, ಮಾಡೆಲ್ ಅಗ್ನಿ. ನಿರೂಪಕರಾಗಿ ಹೆಸರು ಮಾಡಿರುವ  ಅಗ್ನಿ ತಮ್ಮ ವೃತ್ತಿ ಜೀವನದಲ್ಲಿ ಒಂದು ಬ್ರೇಕ್ ಗಾಗಿ ಕಾಯುತ್ತಿದ್ದಾರೆ. ಹೀಗಾಗಿ ಬಿಗ್ ಬಾಸ್ ವೇದಿಕೆಯನ್ನು ಸದುಪಯೋಗಪಡಿಸಿಕೊಳ್ಳಲು ಸಿಕ್ಕ  ಅವಕಾಶ ಬಳಸಿಕೊಳ್ಳಬಹುದು ಎನ್ನಲಾಗಿದೆ. ಹಲವು ಧಾರವಾಹಿಗಳಲ್ಲಿ ತೆರೆ ಹಿಂದೆ ಕೆಲಸ ಮಾಡಿದ ಅನುಭವ ಹೊಂದಿರುವ  ಅಗ್ನಿ ಮಾಡೆಲ್ ಕೂಡಾ ಹೌದು. ಇವರು ಬಿಗ್ ಬಾಸ್ ಮನೆ ಪ್ರವೇಶಿಸುವ ಸಾಧ್ಯತೆಯಿದೆ ಎಂಬ ಮಾತು ಕೇಳಿಬರುತ್ತಿದೆ.
ಇದರಲ್ಲಿ ಇನ್ನಷ್ಟು ಓದಿ :