ಬೆಂಗಳೂರು: ಹೊಸಬರ ಸಿನಿಮಾಗಳು ಥಿಯೇಟರ್ ನಲ್ಲಿ ಹೆಚ್ಚು ಕಾಲ ಬಾಳಿಕೆ ಬರಲ್ಲ. ಅದನ್ನು ಎರಡನೇ ವಾರಕ್ಕೇ ಎತ್ತಂಗಡಿ ಮಾಡಲಾಗುತ್ತದೆ. ಈ ರೀತಿ ಹಲವು ಬಾರಿ ಹೊಸ ತಂಡಕ್ಕೆ ಅನುಭವ ಅಗಿದ್ದುಂಟು. ಈಗ ರಾಮಾರ್ಜುನ ಸಿನಿಮಾ ತಂಡವೂ ಅಂತಹದ್ದೇ ಸಂಕಷ್ಟ ಎದುರಿಸುತ್ತಿದೆ. ಅನೀಶ್ ನಿರ್ದೇಶಿಸಿ, ನಟಿಸಿರುವ ರಾಮಾರ್ಜುನ ಸಿನಿಮಾ ಕಳೆದ ವಾರ ತೆರೆಕಂಡಿತ್ತು. ಹೊಸಬರ ಸಿನಿಮಾವಾದರೂ ಉತ್ತಮ ಪ್ರತಿಕ್ರಿಯೆ ಕೇಳಿಬಂದಿತ್ತು. ಆದರೆ ಈಗ ಎರಡನೇ ವಾರಕ್ಕೇ ಹಲವು ಚಿತ್ರಮಂದಿರಗಳಿಂದ ಸಿನಿಮಾ ತೆಗೆದುಹಾಕಲಾಗಿದೆ.