Photo Courtesy: Twitterಮುಂಬೈ: ರಿಷಬ್ ಶೆಟ್ಟಿ ಕಾಂತಾರ ಸಿನಿಮಾ ನೋಡಿದ ಮೇಲೆ ನಟ ಅನಿಲ್ ಕಪೂರ್ ಗೆ ಮತ್ತೆ ಕನ್ನಡ ಸಿನಿಮಾದಲ್ಲಿ ಅಭಿನಯಿಸುವ ಬಯಕೆ ವ್ಯಕ್ತಪಡಿಸಿದ್ದಾರೆ.ಇತ್ತೀಚೆಗೆ ಬಂದ ಕೆಲವು ಕನ್ನಡ ಸಿನಿಮಾಗಳು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿವೆ. ಹೀಗಾಗಿ ಕನ್ನಡ ಸಿನಿಮಾವನ್ನು ಪರಭಾಷಿಕರೂ ತಿರುಗಿನೋಡುವಂತಾಗಿದೆ.ಕಾಂತಾರ ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿರುವ ಅನಿಲ್ ಕಪೂರ್ ಮುಂದೆ ಅವಕಾಶ ಸಿಕ್ಕರೆ ರಿಷಬ್ ಶೆಟ್ಟಿ ಜೊತೆ ಕೆಲಸ ಮಾಡುವ ಆಸೆಯಿದೆ ಎಂದಿದ್ದಾರೆ.