ಬೆಂಗಳೂರು: ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದ ಸಿನಿಮಾ ಬಿಡುಗಡೆಯಾದ ಒಂದೇ ವಾರಕ್ಕೆ ನಿಂತು ಹೋದರೆ ಸಿನಿಮಾ ತಂಡದವರ ಗತಿ ಏನಾಗಬೇಡ? ಅಂಜನಿ ಪುತ್ರ ತಂಡಕ್ಕೂ ಹಾಗೇ ಆಗಿತ್ತು. ಆದರೆ ಇದೀಗ ಸಮಾಧಾನದ ನಿಟ್ಟುಸಿರು ಬಿಟ್ಟಿದೆ. ಪುನೀತ್ ರಾಜ್ ಕುಮಾರ್ ಅಭಿನಯದ ಅಂಜನಿ ಪುತ್ರ ಬಿಡುಗಡೆಯಾದ ಕೆಲವೇ ದಿನಕ್ಕೆ ವಕೀಲರ ವಿರುದ್ಧ ಆಕ್ಷೇಪಾರ್ಹ ಸಂಭಾಷಣೆಯಿದೆ ಎಂಬ ಕಾರಣಕ್ಕೆ ವಕೀಲರ ಸಂಘ ಕೋರ್ಟ್ ನಿಂದ ತಡೆಯಾಜ್ಞೆ ತಂದಿತ್ತು.ಇದರಿಂದಾಗಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದ ಸಿನಿಮಾಗೆ ದೊಡ್ಡ ಹೊಡೆತ