ಬೆಂಗಳೂರು: ನಟಿ ಮಾನ್ಯ ನಿಮಗೆ ಗೊತ್ತಿರಬೇಕು? ಬಹುಭಾಷಾ ನಟಿ, ಕನ್ನಡ, ಮಲಯಾಳಂ, ತೆಲುಗು, ತಮಿಳು ಸೇರಿದಂತೆ ಒಂದು ಕಾಲದಲ್ಲಿ ಚಿತ್ರರಂಗವನ್ನು ಆಳಿದ ನಟಿ. ಈಕೆ ಬಗ್ಗೆ ಇದೀಗ ಕನ್ನಡ ನಟಿ ಅನುಪ್ರಭಾಕರ್ ಹೇಳಿಕೊಂಡಿದ್ದಾರೆ. ಮಾನ್ಯ ನಿಜಕ್ಕೂ ಸ್ಪೂರ್ತಿದಾಯಕ ನಟಿ. ವರ್ಷ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ ಮೇಲೆ ನಾವಿಬ್ಬರೂ ಉತ್ತಮ ಸ್ನೇಹಿತರಾದೆವು. ಆಕೆ ಒಮ್ಮೆ ನನಗೆ ಹೇಳಿದ್ದಳು. ಸಣ್ಣ ವಯಸ್ಸಿನಲ್ಲಿ ಆಕೆಯ ಬುದ್ಧಿವಂತಿಕೆಯನ್ನು ಒಬ್ಬ ಪುರುಷ ಟೀಕೆ ಮಾಡಿದ್ದನಂತೆ. ಇದನ್ನೇ ಸ್ಪೂರ್ತಿಯಾಗಿ