ಬಿಗ್ ಬಾಸ್ ಮನೆಯೊಳಗೇ ಅನುಪಮಾ-ಜೆಕೆ ಕರಾಳ ರಾತ್ರಿ!

ಬೆಂಗಳೂರು| Krishnaveni| Last Modified ಸೋಮವಾರ, 4 ಡಿಸೆಂಬರ್ 2017 (10:10 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಸದ್ಯಕ್ಕೆ ಸೇಫ್ ಆಗಿ ಉಳಿದಿರುವ ಜೆಕೆ ಮತ್ತು ಅದೃಷ್ಟ ಖುಲಾಯಿಸಿದೆ. ಇವರಿಗೆ ಜಾಕ್ ಪಾಟ್ ನೀಡಿರುವುದೂ ಬಿಗ್ ಬಾಸ್ ಮನೆಯೊಳಗೇ ಇದ್ದ ನಿರ್ದೇಶಕ ಪಿ. ದಯಾಳ್.

ಈ ಹಾಟ್ ಫೇವರಿಟ್ ಬಿಗ್ ಬಾಸ್ ಸ್ಪರ್ಧಿಗಳನ್ನು ಇಟ್ಟುಕೊಂಡು ದಯಾಳ್ ಹೊಸ ಸಿನಿಮಾ ಮಾಡಲು ಹೊರಟಿದ್ದಾರಂತೆ. ಕರಾಳ ರಾತ್ರಿ ಎಂಬ ನಾಟಕ ಆಧಾರಿತ ಸಿನಿಮಾಗೆ ಜೆಕೆ ಮತ್ತು ಅನುಪಮಾ ಗೌಡ ಅವರನ್ನು ನಾಯಕ ನಾಯಕಿಯಾಗಿ ದಯಾಳ್ ಆಯ್ಕೆ ಮಾಡಿಕೊಂಡಿದ್ದಾರೆ.ಬಿಗ್ ಬಾಸ್ ಮನೆಯೊಳಗೇ ಇಬ್ಬರ ಬಳಿಯೂ ಚಿತ್ರದ ಬಗ್ಗೆ ಚರ್ಚೆ ಮಾಡಿ ಎಲ್ಲಾ ಓಕೆ ಮಾಡಿಕೊಂಡಿದ್ದಾರಂತೆ. ಇದೀಗ ಇವರಿಬ್ಬರೂ ಹೊರ ಬಂದ ತಕ್ಷಣ ಸಿನಿಮಾ ಕೆಲಸ ಶುರುವಾಗಲಿದೆ. ಅಂತೂ ಬಿಗ್ ಬಾಸ್ ಮನೆಯೊಳಗೇ ಇದ್ದುಕೊಂಡು ಇಬ್ಬರ ಅದೃಷ್ಟ ಖುಲಾಯಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ

ಮೊಬೈಲ್ ಆ್ಯಪ್

ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :