ಮೆಗಾಸ್ಟಾರ್ ಚಿರಂಜೀವಿ ಚಿತ್ರವನ್ನು ತಿರಸ್ಕರಿಸಿದ ಅನುರಾಗ್ ಕಶ್ಯಪ್

ಹೈದರಾಬಾದ್| pavithra| Last Modified ಸೋಮವಾರ, 19 ಏಪ್ರಿಲ್ 2021 (10:38 IST)
ಹೈದರಾಬಾದ್ : ಟಾಲಿವುಡ್ ನ ಸ್ಟಾರ್ ನಟ ಮಲಯಾಳಂ ಚಿತ್ರ ಲೂಸಿಫರ್ ಅನ್ನು ರಿಮೇಕ್ ಮಾಡಲು ಹೊರಟಿದ್ದಾರೆ. ಅದಕ್ಕಾಗಿ ಲೂಸಿಫರ್ ಚಿತ್ರದ ರಿಮೇಕ್ ಹಕ್ಕುಗಳನ್ನು ಕೂಡ ಖರೀದಿಸಿದ್ದಾರೆ.
ಇದರಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರು ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಹಾಗೇ ಜಯಂ ಮೋಹನ್ ರಾಜ ಅವರು ಈ ಚಿತ್ರವನ್ನು  ನಿರ್ದೇಶಿಸಲಿದ್ದಾರೆ. ಈ ಚಿತ್ರದ ಶೂಟಿಂಗ್ ಸದ್ಯದಲ್ಲೇ ಶುರುವಾಗಬೇಕಿತ್ತು. ಆದರೆ ಕೊರೊನಾ ವೈರಸ್ ಕಾಟದಿಂದ ಮುಂದೂಡಲಾಗಿದೆ.> > ಇತ್ತೀಚಿನ ಮಾಹಿತಿ ಪ್ರಕಾರ ಈ ಚಿತ್ರದಲ್ಲಿ ಎದುರಾಳಿಯ ಪಾತ್ರಕ್ಕಾಗಿ ನಿರ್ಮಾಪಕರು ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದರು. ಆದರೆ ಅವರು ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.


ಇದರಲ್ಲಿ ಇನ್ನಷ್ಟು ಓದಿ :