Widgets Magazine

ಅನುಷ್ಕಾ ಯಾರ ಜೊತೆ ಪ್ರೇಮಿಗಳ ದಿನಾಚರಣೆ ಆಚರಿಸಿದ್ರು ಗೊತ್ತಾ?

ಮುಂಬೈ| navya| Last Modified ಸೋಮವಾರ, 15 ಫೆಬ್ರವರಿ 2016 (12:35 IST)

ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಪರಸ್ಪರ ದೂರವಾಗಿರೋದು ಗೊತ್ತೇ ಇದೆ.ಆದ್ರೂ ಈ ಬಾರಿಯ ಪ್ರೇಮಿಗಳ ದಿನಾಚರಣೆಯಂದಾದ್ರೂ ಇಬ್ಬರು ಮತ್ತೆ ಮುನಿಸು ಮರೆತು ಒಂದಾಗ್ತಾರಾ ಅನ್ನೋ ಕುತೂಹಲ ಅಭಿಮಾನಿಗಳಿತ್ತು.ಆದ್ರೆ ಕುತೂಹಲ ಹುಸಿಯಾಗಿದೆ.


ಅನುಷ್ಕಾ ಈ ಬಾರಿ ತಾನು ಹೇಗೆ ಪ್ರೇಮಿಗಳ ದಿನಾಚರಣೆಯನ್ನು ಆಚರಿಸಿದೆ ಅನ್ನೋ ಬಗ್ಗೆ ಟ್ವಿಟರ್ ನಲ್ಲಿ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ತಾವು ತಮ್ಮ ಮುದ್ದಿನ ನಾಯಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ನಾನು ಪ್ರೇಮಿಗಳ ದಿನವಾದ ಇವತ್ತು ನನ್ನ ಡ್ಯೂಡ್ ಜೊತೆ ಅತ್ಯಮೂಲ್ಯವಾದ ಕ್ಷಣಗಳನ್ನು ಕಳೆದಿದ್ದೇನೆ. ಸದ್ಯ ನಾನು ಜೀವನದ ಸಣ್ಣ ಸಣ್ಣ ಖುಷಿಗಳನ್ನು ಸದ್ಯ ಕಳೆಯುತ್ತಿದ್ದೇನೆ ಅದು ನನಗೆ ತುಂಬಾನೇ ಖುಷಿ ಕೊಡುತ್ತಿದೆ ಅಂತಾ ಅವರು ಹೇಳಿಕೊಂಡಿದ್ದಾರೆ. ಅಲ್ಲದೇ ಫೋಟೋ ತುಂಬಾ ಕ್ಯೂಟ್ ಆಗಿದೆಯಲ್ವಾ ಅಂತಾ ಅನುಷ್ಕಾ ಶರ್ಮಾ ತಮ್ಮ ಫಾಲೋವರ್ಸ್ ಗಳನ್ನು ಕೇಳಿದ್ದಾರೆ.


ಅನುಷ್ಕಾ ತಮ್ಮ ಹಳೆಯ ನೋವನ್ನು ಮರೆಯೋದಕ್ಕೆ ತನ್ನ ಮುದ್ದಿನ ನಾಯಿಯೊಂದಿಗೆ ಸಮಯ ಕಳೆಯುತ್ತಿದ್ದಾರೆ.ಆದ್ರೆ ವಿರಾಟ್ ಹೇಗೆ ಪ್ರೇಮಿಗಳ ದಿನಾಚರಣೆಯನ್ನು ಆಚರಿಸಿದ್ರು ಅನ್ನೋ ಕುತೂಹಲ ಮಾತ್ರ ಅಭಿಮಾನಿಗಳನ್ನು ಕಾಡುತ್ತಿದೆ.ಅದಕ್ಕೆ ಅವರೇ ಉತ್ತರ ನೀಡಬೇಕಾಗಿದೆ.ಇದರಲ್ಲಿ ಇನ್ನಷ್ಟು ಓದಿ :