ಹೈದರಾಬಾದ್: ಕನ್ನಡದ ಕಾಂತಾರ ಸಿನಿಮಾ ಈಗ ಪರಭಾಷೆಯವರೂ ತಿರುಗಿ ನೋಡುವಂತೆ ಮಾಡುತ್ತಿದೆ.ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾವನ್ನು ಅನೇಕ ಪರಭಾಷಾ ಸ್ಟಾರ್ ಕಲಾವಿದರೂ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆ ಸಾಲಿಗೆ ಮೂಲತಃ ಕನ್ನಡತಿಯಾದ ಅನುಷ್ಕಾ ಶೆಟ್ಟಿ ಕೂಡಾ ಸೇರಿದ್ದಾರೆ.ಬಾಹುಬಲಿ ನಟಿ ಕಾಂತಾರ ಸಿನಿಮಾ ವೀಕ್ಷಿಸಿ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಕಾಂತಾರ ಸಿನಿಮಾ ನೋಡಿದೆ. ಎಂಥಾ ಅದ್ಭುತ ಸಿನಿಮಾ. ಇಡೀ ಚಿತ್ರತಂಡಕ್ಕೆ ನನ್ನ ಅಭಿನಂದನೆಗಳು. ನೋಡಲು ಮರೆಯದಿರಿ’ ಎಂದು