ಒಟಿಟಿ ಮೂಲಕ ರಿಲೀಸ್ ಆಗಲಿದೆ ಅನುಷ್ಕಾ ಅಭಿನಯದ ನಿಶ್ಯಬ್ಧಂ ಚಿತ್ರ

ಹೈದರಾಬಾದ್| pavithra| Last Modified ಶುಕ್ರವಾರ, 4 ಸೆಪ್ಟಂಬರ್ 2020 (11:03 IST)
ಹೈದರಾಬಾದ್ : ನಟಿ ಅನುಷ್ಕಾ ಶೆಟ್ಟಿಯವರ ‘ನಿಶ್ಯಬ್ಧಂ’ ಚಿತ್ರವನ್ನು ಒಟಿಟಿ ಮೂಲಕ ರಿಲೀಸ್ ಮಾಡಲಾಗುತ್ತಿದ್ದು, ಅದಕ್ಕಾಗಿ ಅಮೆಜಾನ್ ಪ್ರೈಂ ಭಾರೀ ಮೊತ್ತದ ಹಣ ನೀಡಿದೆಯಂತೆ.

ಕೊರೊನಾ ಭೀತಿ ಹಿನ್ನಲೆಯಲ್ಲಿ ಚಿತ್ರಮಂದಿರಗಳನ್ನು ಕ್ಲೋಸ್ ಮಾಡಲಾಗಿದೆ. ಆದಕಾರಣ ಈ ಹಿಂದೆ ಈ ಚಿತ್ರವನ್ನು ಒಟಿಟಿ ಮೂಲಕ ರಿಲೀಸ್  ಮಾಡಲು ನಿರ್ಮಾಪಕರು ಮುಂದಾಗಿದ್ದರಂತೆ. ಆದರೆ ಸದ್ಯದಲ್ಲೇ ಚಿತ್ರಮಂದಿರ ತೆರೆಯುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ  ಇದಕ್ಕೆ ನಟಿ ಅನುಷ್ಕಾ ಸೇರಿದಂತೆ ಚಿತ್ರತಂಡದ ಹಲವರು ಅನುಮತಿ ನೀಡಲಿಲ್ಲವಂತೆ.

ಆದರೆ ಅನ್ ಲಾಕ್ 4ರ ಮಾರ್ಗಸೂಚಿಯಲ್ಲೂ ಚಿತ್ರಮಂದಿರ ತೆರೆಯಲು ಅನುಮತಿ ಸಿಗಲಿಲ್ಲ. ಆದಕಾರಣ  ನಿರ್ಮಾಪಕರು ನಿಶ್ಯಬ್ಧಂ ಚಿತ್ರವನ್ನು ಒಟಿಟಿಯಲ್ಲಿ ರಿಲೀಸ್ ಮಾಡಲು ನಿರ್ಧರಿಸಿದ್ದು, ಅದಕ್ಕಾಗಿ ಅಮೆಜಾನ್ ಫ್ರೈಂ ಗೆ 25ಕೋಟಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಸದ್ಯದಲ್ಲೇ ಸಿನಿಮಾ ರಿಲೀಸ್ ದಿನಾಂಕ ಸಹ ಹೊರಬೀಳಲಿದೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :