ಸಾವಿನಲ್ಲೂ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸಾರ್ಥಕತೆ ಮೆರೆದಿದ್ದರು. ಡಾ.ರಾಜ್ಕುಮಾರ್ ಅವರಂತೆ ನೇತ್ರದಾನ ಮಾಡಿದ್ದರು. ಈಗ ಅಪ್ಪು ಅವರ ಎರಡು ಕಣ್ಣು, ಕತ್ತಲೇ ತುಂಬಿದ್ದ ನಾಲ್ವರ ಬಾಳಲ್ಲಿ ಬೆಳಕು ಮೂಡಿಸಿದೆ. ಹೌದು, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನೇತ್ರದಾನ ಮಾಡಿದ್ದರು. ಅಪ್ಪು ಕಣ್ಣನ್ನು ನಾಲ್ವರಿಗೆ ಅಳವಡಿಕೆ ಮಾಡಲಾಗಿದೆ ಅಂತ ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ.ಭುಜಂಗಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ನಾಲ್ವರ ಬದುಕಲ್ಲಿ ಬೆಳಕಾದ ಅಪ್ಪು! ಪುನೀತ್ ರಾಜ್ಕುಮಾರ್ ಕಣ್ಣುಗಳನ್ನು ಪಡೆದು ಶಸ್ತ್ರಚಿಕಿತ್ಸೆ