ತಮಿಳಿನ ಖ್ಯಾತ ನಿರ್ದೇಶಕ ಎ.ಆರ್. ಮುರುಗದಾಸ್ ಕಳೆದ ಮೂರು ವರ್ಷಗಳಿಂದ ಯಾವುದೇ ಬಹುರಾಷ್ಟ್ರೀಯ ಕಂಪೆನಿಗಳ ಶೀತಲ ಪಾನೀಯ ಕುಡಿಯುವುದನ್ನು ಬಿಟ್ಟುಬಿಟ್ಟಿದ್ದಾರಂತೆ. ಈ ವಿಷಯವನ್ನು ಸ್ವತಃ ಅವರೇ ಟ್ವಿಟ್ಟರ್ನಲ್ಲಿ ಹೇಳಿಕೊಂಡಿದ್ದಾರೆ. ಮುರುಗಾಸ್ ನಿರ್ದೇಶನದಲ್ಲಿ ಕತ್ತಿ ಚಿತ್ರ ಬಂದಿದ್ದು ಗೊತ್ತೇ ಇದೆ. ಈ ಚಿತ್ರದಲ್ಲಿ ಶೀತಲ ಪಾನೀಯಗಳ ತಯಾರಿಯಿಂದ ಗ್ರಾಮಗಳಲ್ಲಿನ ನೀರಿನ ಸಂಪನ್ಮೂಲ ಕಲುಷಿತವಾಗುತ್ತಿರುವ ಬಗ್ಗೆ ಬೆಳಕು ಚೆಲ್ಲಿದ್ದರು. ಕೇವಲ ಕಮರ್ಷಿಯಲ್ ಹಿಟ್ಗಾಗಿ ಅಲ್ಲದೆ ಈ ಚಿತ್ರದ ಮೂಲಕ ಆಚರಣೆಗೂ ಮುಂದಾದರು.